ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಆಗಸ್ಟ್ ವಿಲ್‌ಹೆಲ್ಮ್ ವಾನ್ ಹೋಫ್‌ಮನ್‌ರವರು ೧೮೧೮ರ ಏಪ್ರಿಲ್ ೮ರಂದು ಗೀಸೆನ್‌ನಲ್ಲಿ ಜನಿಸಿದರು. ಕಲ್ಲಿದ್ದಲು ಡಾಂಬರಿನಲ್ಲಿ ( ) ಅನಿಲೀನ್‌ನ () ಅಸ್ತಿತ್ವದ ಸಂಶೋಧನೆ ಹೋಫ್‌ಮನ್‌ರವರ ಮೊದಲ ಸಂಶೋಧನೆಯಾಗಿತ್ತು. ೧೮೫೦ರ ಸುಮಾರಿಗೆ ಹೋಫ್‌ಮನ್‌ರವರು ‘ಅಮೀನ್’ಗಳ () ಗುಣಸ್ವಭಾವಗಳನ್ನೂ, ಅವುಗಳ ವರ್ತನೆಯನ್ನೂ ಕಂಡುಹಿಡಿದರು. ನಂತರ ‘ಆಲ್ಕೈಲ್ ಅಮೀನ್’ಗಳನ್ನು ( ) ಕೂಡ ತಯಾರಿಸಿದರು. ಡೈಅಮೀನ್‌ಗಳು ಮತ್ತು ಆಲ್ಕೈಲ್ ಹಾಲೈಡ್‌ಗಳ ಸಂಯೋಜನೆಯಿಂದ ಅನೇಕ ಸಂಕೀರ್ಣವಾದ ಅಮೀನ್‌ಗಳನ್ನು ಹೋಫ್‌ಮನ್‌ರವರು ತಯಾರಿಸಿದರು. ‘ಫಾರ್ಮಲ್ಡಿಹೈಡ್’ನ ( ) ಆಂತರಿಕ ರಚನೆ ಮತ್ತು ಗುಣಸ್ವಭಾವಗಳನ್ನು ಕಂಡುಹಿಡಿದವರಲ್ಲಿ ಹೋಫ್‌ಮನ್‌ರವರು ಮೊದಲಿಗರಾಗಿದ್ದಾರೆ. ಹಾಫ್‌ಮನ್‌ರವರು ೧೮೫೮ರಲ್ಲಿ ‘ಫುಷೈನ್’ ಅಥವಾ ಮೆಜೆಂಟಾ ರಂಗನ್ನು ( ) ತಯಾರಿಸಿದರು. ನಂತರ ಇತರ ಅನೇಕ ರಂಗುಗಳನ್ನು ತಯಾರಿಸಿದ ಹೋಫ್‌ಮನ್‌ರವರು ೧೮೬೩ರಲ್ಲಿ ಅವುಗಳ ಪೇಟೆಂಟ್ ಗಳಿಸಿದರು. ಹೋಫ್‌ಮನ್‌ರವರು ೧೮೯೨ರ ಮೇ ೨ರಂದು ಬರ್ಲಿನ್‌ನಲ್ಲಿ ನಿಧನರಾದರು. == ಉಲ್ಲೇಖಗಳು ==